Wednesday 21 November 2007

ಪುಣ್ಯಾಹ-

ಪುಣ್ಯಾಹ -- ಅಪವಿತ್ರತೆಯನ್ನು ತೊಳೆದು ಪವಿತ್ರೀಕರಿಸುವುದು.

ನೊವೆಂಬರ ಮಾಸ ಬಂದರೇ ಎಲ್ಲೆಡೆ ಸಂಬ್ರಮದ ಗಾಳಿ, ಇಡೀ ಭರತದಲ್ಲಲ್ಲ ಬರೇ ಕರ್ನಾಟಕದಲ್ಲಿ, ಹಾ ಬಹಳ ಮಂದಿಗೇ ಕನ್ನಡ ಹಾಗು ಕರ್ನಾಟಕ ಆಗ ಮಾತ್ರ ಗುರುತಿಗೆ ಬರುತ್ತದ್ದೇ.ಎಲ್ಲಿ ನೋಡಿದರು ರಸ್ತೆ ತಡೆದು ಶಮಿಯಾನ ಹಾಕಿರುತ್ತಾರೇ, ಭುವನೇಶ್ವರಿಯ ಒಂದು ಭಾವ ಚಿತ್ರಕ್ಕೆ ಹೂವಿನ ಅಲಂಕರ, ರಜಕುಮರರ ಭವ್ಯ ಹಾಡುಗಳು. ಇಷ್ಟೇನಾ ನಾಡ ಹಬ್ಬದ ಹುಮ್ಮಸ್ಸು. ಇದರಿಂದಾ ಕನ್ನಡ ಉಳಿಯುತ್ತಿದೆಯೇ ಅಥವ ಬೆಳೆಯುತ್ತಿದೆಯೇ, ವಿಚಾರಾರ್ಹ ವಿಷಯ ಇದು.
ಇನ್ನು ಭಷಣಗಾರರೋ ನಮ್ಮ ಪ್ರಿಯ ರಾಜಕಾರಿಣಿಗಳು, ಅವರಿಂದ ಭಾಷೆಯ ರಕ್ಷಣೆ ದೂರದ ಮಾತು ಬರೇ ಶೋಷಣೆ ಮಾತ್ರ. "ಅ"ಕಾರಕ್ಕು "ಹ"ಕಾರಕ್ಕು ವ್ಯತ್ಯಾಸವೇ ಇಲ್ಲ. ನಾಲ್ಕು ಸಾಲಿನ ಭಷಣದಲ್ಲಿ ಸಾಲಿಗೇ ನಾಲ್ಕು ಆಂಗ್ಲ ಪದಗಳ ಬಳಿಕೇ.ಇವರಿಲ್ಲದಿದ್ದರೆ ಚಿತ್ರ ನಟರು, ಅವರ ಪಾಡೋ ಆ ದೇವರಿಗೆ ಗೊತ್ತು. ಬಹಳ ನಟರು ಕನ್ನಡದವರೇ ಅಲ್ಲ ಉಳಿದವರು ಕನ್ನಡದವರೇ ಆದರು ಭಷೆಯಿಂದ ವಂಚಿತರು ಪಾಪ.ಹೀಗಿದೆ ನಮ್ಮ ನಾಡಹಬ್ಬದ ಧುಂಧುಭೀ ಹಬ್ಬದ ಹೆಸರಿನಲ್ಲಿ ಸುಲಿಗೇ ಮಾತ್ರ ನೆಡೆಯುತ್ತದ್ದೆ.
ಒಂದು ಬಾರಿ ನಾನು ನಮ್ಮ ರಸ್ತೇಕೊನೆ ಆಚರಿಸುತ್ತಿದ್ದ ರಾಜ್ಯೋತ್ಸ್ತವ ಕಾರ್ಯಕ್ರಮವನ್ನು ಹಾದು ಹೋಗುತ್ತಿದ್ದಾಗ ಒಬ್ಬ ಹೇಸರಾಂತ ಕನ್ನಡ ನಟರು ಮಾತನಾಡುತ್ತಿದ್ದರು, ನಾರಾಯಣ ನಾನು ಕಿವುಡನಾಗಿದ್ದರೇ ಎಷ್ಟೋ ಚಂದಾವಾಗಿರುತ್ತಿತ್ತು ಅಂದು ಕೊಂಡೆನು. ಅಂತಾ ಹೊಲಸು ಪ್ರಯೋಗ. ಇವರೇಲ್ಲ ಭಾಷಾಭಿಮಾನಿಗಳಂತೇ. ಧನ್ಯ ಕನ್ನಡ ಮಾತೇ. ಅಂದಿನಿಂದಾ ಎನೋ ಅಸಡ್ಡೆ ನನಗೇ ನಮ್ಮ ಚಿತ್ರರಂಗದಮೆಲೆ.
ಇತ್ತೀಚಿನ ಚಲನ ಚಿತ್ರಗಳ ಗುಣಮಟ್ಟ ನೋಡಿದರೆ ವಿಷಾದನೀಯ. ಯೆಲ್ಲದರಲ್ಲು ಹೊಡೆದಾಟ, ಹಿಂಸೆ, ಪ್ರಚೋದಕ ವಿಷಯಗಳೇ ತಪ್ಪ ಬಾಂದವ್ಯ, ಭಕ್ತಿ, ಧರ್ಮ, ವೈವಿದ್ಯಮಯತೆ ಇಲ್ಲ. ತುಚ್ಹ ಭಷಾ ಪ್ರಯೋಗ, ಬ್ರಷ್ಟ ನಟನೆ, ಅಂಗಾಂಗ ಪ್ರದರ್ಶನ ಹಾಗು ಹೀನ ಸಂದೇಶ ಸಾರುವ ಈ ಚಿತ್ರಗಳನ್ನ ನೊಡದೇ ಇರುವುದೇ ಲೇಸು. ಇಂತಹ ಚಿತ್ರಗಳನ್ನ ಪ್ರೊತ್ಸಾಹಿಸುವುದೇ ಪರಮ ಪಾಪ.
ಎಲ್ಲಿ ಹೋಯಿತು ಆ ಗತ ವೈಭವ, ರೋಮಾಂಚಕರಿಸುವ ನಟನೆ, ಕರ್ಣಾನಂದದ ಸಂಗೀತ , ಆಸ್ವಾದನೀಯ ಸಾಹಿತ್ಯ . ಜನರು ವಿಕಾಸದೆಡೆಗೆ ಹೊರೆಟರಂದರೆ ಕೇವಲ ದೈಹಿಕ ಹಾಗು ಸಾಮಾಜಿಕ ಸ್ತಿತಿಗತಿಗಳಲ್ಲ ಇದರೊಡನೆ ಮಾನಸಿಕ ಹಾಗು ತಾತ್ವಿಕ ಚಿಂತನೆಯಲ್ಲು.ಆಗಲೇ ಅದು ಪರಿಪೂರ್ಣ ವಿಕಾಸವೆನಿಸುವುದು.
ಆಗಿಂದಾಗ ನಾನು ಇದರ ಬಗ್ಗೇ ಯೋಚಿಸುತ್ತಿನಿ. ಇತ್ತೀಚಿನ ಕಲಾಗಾರರಿಗೇ ಕ್ರಿಯಾತ್ಮಕ ಚೈತನ್ಯ ಕ್ಷಿತಿಲಗೊಂಡಿದೆ. ಬಾಹ್ಯ ಪ್ರಪಂಚದ ಅರಿವು ಇಲ್ಲವಾಗಿದೇ. "ಬಾಹ್ಯ" ನನ್ನ ಪ್ರಯೋಗದ ಪ್ರಕಾರ ವಿದೇಶದತ್ತ ಅಲ್ಲ ನೈಸರ್ಗಿಕ ಅವಲೋಕನ ಎಂದು. ಸಾಹಿತ್ಯ ರಚನಕಾರರಿಗೆ ಇಂಥಾ ಅನುಭವ ಬಹಳ ಮುಖ್ಯಾ. ಅವರು ನಿಸರ್ಗವನ್ನು ಅನುಭವಿಸಿದಾಗ ಮಾತ್ರ ಭಾವನಾತೀತವಾಗಿ ಸಹಿತ್ಯ ತನಗೇ ತಿಳಿಯದಂತೆ ತನ್ನ ಮನಸಿನೊಳಗೆ ಬೀಜ ಬಿತ್ತು ಹೋರಹೊಮ್ಮುವುದು.ಇದರ ಜೊತೆಗೆ ಅವನು ಜ್ಞಾನದ ಬಂಡಾರವನ್ನು ಪ್ರತಿಭಿಂಭಿಸಬೇಕು. ಪುರಾಣ ಪುಣ್ಯ ಕಥೇಗಳನ್ನು ತಿಳಿದಿದ್ದರೆ ಇನ್ನು ಒಳ್ಳೇಯದೆ. ನೀತಿಪಾಟ ಅಮರಕೋಶ ಇವು ಅವನ ಬಾಯಿಪಾಟ. ಸಾಹಿತ್ಯಾಅನ್ನೋದು ಇದರ ಕಂದ.
ನಮ್ಮ ವಿಜಯನಾರಸಿಂಹ,ಜಿ.ವಿ.ಅಯ್ಯರ್,ಚಿಉ ಇವರನ್ನೆಲ್ಲ ನೆನೆದರೆ ಮನಸ್ಸಿಗೆ ನೋವ್ವುಂಟಾಗುವುದು. ಎಂಥಾ ಹಾಡುಗಳು ಅವು, ಒಂದೊಂದು ಆಣಿಮುತ್ಯಗಳು. ಇತ್ತೀಚಿನ ಗೀತೇಯೋಂದನ್ನ ಕೇಳಿ ಮನಸ್ಸಿಗೇ ಬಹಳ ಬೇಸರವಾಯಿತು,
ನಟಃ ನಿಮ್ಮ ಅಪ್ಪಯೇನು ಟೆರರಿಸ್ಠಾ
ನಟಿಃ ಯಾಕೇ
ನಟಃ ನಿನ್ನಂತ ಬಾಂಬನ್ನ ತಯಾರಿಸಿದ್ದಾನಲ್ಲ ಅದಕ್ಕೆ.
ಎಂಥ ವಿಪರ್ಯಾಸ ನೋಡಿ. ಇಂಥ ಸಾಹಿತ್ಯಾ ಹಾಗು ಕರ್ಣಖಠೋರ ಸಂಗೇತ. ಎಲ್ಲಿಂದಾ ಉಳಿವಿಕೆ ಇದೇ ಹೇಳಿ ಈ ಭಾಷೆಗೆ. ಹಿಂದೆ ಚಿತ್ರಗಳಲ್ಲಿ ಒಂದು ಹಾಡೆಂದರೆ ಅದಕ್ಕೇ ತಕ್ಕಮಟ್ಟದ ಸಾಹಿತ್ಯಾ, ಸಂಗೀತ ಹಾಗು ನರ್ತನ ಒಳಗೊಂಡಿರುವುದು. ಆ ನಟರೋ ಕಣ್ಣಿನಲ್ಲೇ ಎಲ್ಲ ಭಾವನೆಗಳನ್ನು ತೋರಿಸುತ್ತಿದ್ದರು.
ಸ ಪ ಸಾ ತಿಳಿಯದ ಸಂಗೀತಗಾರರು. ಯಲ್ಲವು ಪಾಶ್ಚಿಮಾತ್ಯ ಸಂಗೀತದ ಮಿಶ್ರಣ, ಸ್ವಾವಲಂಬನೆ ಇಲ್ಲ. ನಮ್ಮ ಸಾಮವೇದ ಸಾರವಾಗಿರುವ ನಾದ ಯಾರಿಗು ಬೇಡ. ಕೆಲವರಿಗೆ ಸಂಗೀತ ಸಾಮವೇದಸಾರ ಅನ್ನೋದು ಗೊತ್ತಿಲ್ಲಿ.
ಇನ್ನು ಆ ನಟ ನಟಿಯರೋ ಯಾವ ಭಾಷೇಯವರು ಬೇರೇ ಭಷೇಯ ಚಿತ್ರಗಳಲ್ಲಿ ನಟಿಸುವುದೆ ಹೆಚ್ಹು. ಆ ಪಾತ್ರಗಳಿಗೆ ಹೇಗೆ ಜೇವ ತುಂಬುತ್ತಾರೋ ಅದು ಇನ್ನು ನಿಘುಢ. ಇದರಿಂದಲೇ ಅವರಿಗೆ ಆ ಪ್ರಾವೀಣ್ಯತೇ ದೋರಕದೇ ಹೋಗುವುದು.
ಅಥವಾ ಹೊಡೆದಾಟ ಇಲ್ಲ ಪ್ರೇಮ ಇವೆರಡೇ ರಸ ಪ್ರದಾನದಲ್ಲಿರುವುದು. ಬೇರೆ ರಸಗಳೆಲ್ಲ ಮಲಗಿವೆ. ನವರಸಗಳಲ್ಲು ತನ್ನ ಜಾಣ್ಮೆಯನ್ನು ತೋರಿಸುವವನೇ ನಿಜವಾದ ನಟ.
ಇನ್ನು ಹಸ್ಯಾ, ಅದು ಪರಮ ಹೀನಾಯ. ಕೇವಲ ಮನುಷ್ಯರನ್ನು ನೋಡಿದರೆ ಸಾಕು ನಗು ಬರುತಿತ್ತು ಹಿಂದೆ. ಹೆಣ್ಣು ಮಕ್ಕಳನ್ನ ಅವಾಚ್ಯವಾಗಿ ಹಂಗಿಸುವುದು, ಅಲ್ಪ ಭಾಷೇಯ ಉಪಯೋಗ ಇದೇಲ್ಲ ಹೇಗೆ ಹಾಸ್ಯವಾದಿತು.ಹೋಗಲಿ ಆ ನಟರಾದರು ನೋಡಲು ಚೇನ್ನಾಗಿರುತ್ತರೋ ಅದೂ ಇಲ್ಲ. ಎಲ್ಲಿದೇ ಹಾಸ್ಯ.
ದಿಕ್ಕೇಟ್ಟ ನಿರ್ದೇಶಕರು, ರಸಹೀನ ತಂಡ ಎಲ್ಲಿಂದಾ ಒಳ್ಳೆಯ ಚಿತ್ರವನ್ನು ಕೊಡಬಲ್ಲದು ಹೇಳಿ. ಸುಲಭವಾಗಿ ಜನರಮೇಲೇ ಸಲ್ಲದ ಅಪವಾದವನ್ನು ಹೋರಿಸುತ್ತಾರೇ ಈ ಚಿತ್ರಕಾರರು. ಯಾರನ್ನಾದರು ಕೇಳಿ "ಮಾಸ್" ಚಿತ್ರ ನೋಡಲು ಜನರ ಆಸೇ ಅನ್ನುತ್ತರೇ. ಆದರೇ ಇವರಿಗೇ ತಿಳಿಯದ ಸತ್ಯಯೇನೆಂದರೇ ಜನರು ಯಂದಿಗೂ ಉತ್ತಮ ಗುಣಮಟ್ಟದ ಚಿತ್ರಗಳನ್ನೇ ಅಪೇಕ್ಷಿಸುತ್ತರೇ. ಇದನ್ನು ಕೋಡುವ ಹೋಣೆ ಇವರದು.
ಭಾಷೆಯ ಗುಣಮಟ್ಟವನ್ನು ಎತ್ತುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ. ಎಲ್ಲಿಯವರೆಗು, ಕುವೇಂಪು, ಡಿವಿಜಿ, ಬೇಂದ್ರೆ ,ಇವರ ಕೊಡುಗೆ ಕಾಲ ಮುಗಿದಿದೇ. ಇವತ್ತು ನಾವು ಅವರನ್ನ ನೆನೆಯುತ್ತೇವೆ, ಅಂಥ ಅಪಾರ ಕೊಡುಗೆ ಅವರದು. ಇವರನ್ನು ಮೀರಿಸುವ ಜನರು ಬರಬೇಕು. ಆಗ ನಾವು ನಿಜವಾಗಿಯು ವಿಕಾಸದೆಡೆಗೆ ನೆಡೆಯುತ್ತಿದ್ದೇವೆಯೆಂದು.
ನಮ್ಮ ಕಿವಿಯೊಳಗೆ ಏಂದೆಂದಿಗು "ಏಲ್ಲಾದರು ಇರು ಏಂಥಾದರು ಇರು" ಹಾಡು ಗುಣಗುಟ್ಟಬೇಕು. ಚಿತ್ರ ಮಾಧ್ಯಮವನ್ನು ತೊಳೆಯುವ ಕಾರ್ಯ ಮಾಡಬೇಕು. ಜನರನ್ನು, ಭಾಷೆಯನ್ನು ಅಯೋಮಯ ಮಾಡುತ್ತಿರುವ ಈ ಮಾಧ್ಯಮವನ್ನು ಉತ್ತಮ ಸ್ತಿತಿಗೇ ಒಯ್ಯಬೇಕು. ಇದರಿಂದ ನಮಗು ನಮ್ಮ ಕನ್ನಡಕ್ಕು ಒಳ್ಳೆಯದು. ಹೊರ ಪ್ರಪಂಚಕ್ಕೇ ಕನ್ನಡವನ್ನು ಪ್ರತಿನಿಧಿಸುತ್ತಿರುವ ಈ ಮಾಧ್ಯಮ ಎಂದಿಗು ಕೀರ್ಥಿಯತ್ತ ಮುನ್ನೆಡೆಯಬೇಕು. ಇದಕ್ಕೆ ಅಳತೆ ಮೀರಿದ ಗುಣವುಳ್ಳ ಜನರನ್ನು ಪ್ರೋತ್ಸಾಹಿಸಬೇಕು. "ಮಾಸ್ " ಅಳಿದು "ಕ್ಲಾಸ್ " ಉಳಿಯುವಂತಾಗಬೇಕು. ಇದು ಕನ್ನಡದ ಅಭಿವೃದ್ಧಿಗೆ ನಾಂದಿಯಾಗಬೇಕು.

No comments: